ಸುಮಾರು ಹತ್ತು

TefZa | Thursday, 10 March 2022


 ಸುಮಾರು ಹತ್ತು ವಾಕ್ಯಗಳಲ್ಲಿ ಉತ್ತರಿಸಿ.

ಗದ್ಯ -1 ಒಣಮರದ ಗಿಳಿ  

1. ಗಿಳಿಯು ಪರಹಿತಾಕಾಂಕ್ಷಿ ಎನಿಸಿಕೊಂಡದ್ದು ಹೇಗೆ ವಿವರಿಸಿ?

ಗಿಳಿಯು ಮರವು ಒಣಗಿದರೂ ಆಶ್ರಯವನ್ನು ತೊರೆದು ಹೋಗಲಿಲ್ಲ.ಜೊತೆಯಲ್ಲಿ ಇದ್ದು ಒಳ್ಳೆಯ ದಿನ ಬರಲಿ ಎಂದು ಹಾರೈಸತೊಡಗಿತು. ಅದರ ತತ್ವನಿಷ್ಠೆಯನ್ನು ಮೆಚ್ಚಿಕೊಂಡ ಇಂದ್ರನು ಏನಾದರೂ ವರವನ್ನು ಕೇಳು ಎಂದಾಗ ಮರವು ಮೊದಲಿನಂತೆ ಫಲಪುಷ್ಟದಿಂದ ಹಸಿರಿನಿಂದ ಕೂಡಿ ನೆರಳು ಕೊಡುವಂತೆ ದಯಪಾಲಿಸು ಎಂದು ಕೇಳಿತು.ನನಗೆ ಮರದ ಈಗಿನ ಸ್ಥಿತಿಯನ್ನು ನೋಡಲು ಆಗುವುದಿಲ್ಲ ಎಂದಿತು.ಗಿಳಿಯು ಎಂಥ ಜನ್ಮವನ್ನು ಬಯಸಿದ್ದರೂ ಎಂಥ ಭೋಗವನ್ನು ಬಯಸಿದ್ದರೂ ಇಂದ್ರನು ಕೊಡಲು ಸಿದ್ಧನಾಗಿದ್ದ.ಆದರೆ ಗಿಳಿ ಕೇಳಿದ ವರವು ಸ್ವಾರ್ಥರಹಿತವಾಗಿತ್ತು.ಅದರ ನಡತೆ ಲೋಕವರ್ತನೆಗೆ ವಿರುದ್ಧವಾಗಿರುವುದರಿಂದ ಗಿಳಿ ಪರಹಿತಾಕಾಂಕ್ಷಿ ಎನಿಸಿಕೊಂಡಿದೆ.

2. ಗಿಳಿಯ ವರ್ತನೆಯಿಂದ ಮಾನವನು ಕಲಿಯ ಬೇಕಾದ ಗುಣಗಳೇನು?

ಗಿಳಿಯ  ವರ್ತನೆಯು  ನಮಗೆ  ಕೃತಜ್ಞತೆಯನ್ನು  ಕಲಿಸುತ್ತದೆ.ಕಷ್ಟದಲ್ಲಿರುವವರಿಗೆ  ಜೊತೆಯಾಗಿದ್ದು  ಅದನ್ನು ಪರಿಹರಿಸಬೇಕು.ಸ್ವಾರ್ಥವನ್ನು ಬಿಡಬೇಕು ಬೇರೆಯವರ ಒಳಿತನ್ನು ಬಯಸುವುದು ಮಾನವನ ಕರ್ತವ್ಯ ಅದರಿಂದ ನಮ್ಮ ಜೀವನದಲ್ಲಿ  ಸುಖ  ಸಂತೋಷಗಳು  ಬರುತ್ತವೆ  ಎಂಬುದನ್ನು  ತಿಳಿಯಬಹುದು.ಸುಖಸಂಪತ್ತಿನ  ಕಾಲದಲ್ಲಿ ಜೊತೆಯಲ್ಲಿದ್ದವರು ಕಷ್ಟಕಾಲದಲ್ಲೂ ಕೂಡ ಅವರ ಜೊತೆಗೇ ಇದ್ದು ಉಪಕಾರ ಸ್ಮರಣೆಯನ್ನು ಮಾಡಬೇಕು ಎಂಬ ಗುಣಗಳನ್ನು ಗಿಳಿಯ ವರ್ತನೆಯಿಂದ ಮಾನವನು ಕಲಿಯಬೇಕು.

ಗದ್ಯ- 2  ರಾಹುಲ್ ದ್ರಾವಿಡ್  

1. ರಾಹುಲ್ ದ್ರಾವಿಡರು ಇತರ ಆಟಗಾರರಿಗಿಂತ ಭಿನ್ನರೆನಿಸಿದ್ದು ಹೇಗೆ?

ಬೌಂಡರಿ ಬಾರಿಸಿ ದಾಖಲೆ ಮಾಡುವ ಆಟಗಾರರ ಗುಂಪಿಗೆ ದ್ರಾವಿಡರು ಸೇರುವುದಿಲ್ಲ. ಸಂಯಮದ ಹೊಡೆತ, ಉತ್ತಮ ಎಸೆತವನ್ನು ಗೌರವಿಸಿ ಕೆಟ್ಟ ಎಸೆತವನ್ನು ವಿರೋಧಿಸುವುದು, ಆಟದಲ್ಲಿ ಶಿಸ್ತು, ಕಲಾತ್ಮಕತೆ ಇವರ ಆಟದ ವೈಶಿಷ್ಟ್ಯ.ದ್ರಾವಿಡರುಎಂದೂ ಸ್ವಂತ ದಾಖಲೆಗಾಗಿ ಆಡಿದವರಲ್ಲ; ತಂಡಕ್ಕಾಗಿ ತಪಸ್ಸು ಅವರದು.  ದೇಶ ಮೊದಲು, ದೇಶಕ್ಕಾಗಿ ಆಡುಎಂಬುದೇ ಅವರ ಧ್ಯೇಯ ಆದ್ದರಿಂದ ರಾಹುಲ್ ದ್ರಾವಿಡರು ಇತರ ಆಟಗಾರರಿಗಿಂತ ಭಿನ್ನರೆನಿಸಿಕೊಂಡರು.ಅವರ ಹಿರಿಯರು ಅವರಿಗೆ ಈ ಮೇಲಿನ ಅಂಶಗಳನ್ನೇ ಬೋಧಿಸಿದ್ದರು.ಯಶಸ್ಸಿನ ಶಿಖರದಲ್ಲಿರುವಾಗಲೇ ಕಿರಿಯರಿಗೆ ಅವಕಾಶ ಮಾಡಿಕೊಡಲೆಂದು 2012 ಮಾಚರ್್ನಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ವಿದಾಯ ಹೇಳಿದರು.ದ್ರಾವಿಡ್ ಒಬ್ಬ ಅಪ್ರತಿಮ ಆಟಗಾರರಾಗಿದ್ದರು.

ಗದ್ಯ -3 ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ  

1. ಸಾಧನೆಗೆ ಅಂಗಹೀನತೆಯು ಅಡ್ಡಿಯಾಗದು ಎಂಬುದು ಪುಟ್ಟರಾಜರ ವಿಷಯದಲ್ಲಿ ನಿಜವಾಗಿದೆ ಇದನ್ನು ಸಮಥರ್ಿಸಿ.

ಪುಟ್ಟರಾಜರು ಸಂಗೀತದೊಂದಿಗೆ ಶ್ರದ್ಧೆ, ಪರಿಶ್ರಮದಿಂದ ಸ್ವರಮಂಡಲ, ಸಾರಂಗಿ, ಸರೋದ, ಪಿಟೀಲು, ಹಾರ್ಮೋನಿಯಂ ಮತ್ತು  ತಬಲಾ  ವಾದನದಲ್ಲಿ  ಪ್ರಾವೀಣ್ಯವನ್ನು  ಪಡೆದರು.ಹಿಂದೂಸ್ತಾನಿ,  ಕನರ್ಾಟಕ  ಸಂಗೀತವನ್ನು ಸಿದ್ಧಿಗಳಿಸಿಕೊಂಡರು.ಅಂಧರ ಓದಿನ ಬ್ರೈಲ್ ಲಿಪಿಯನ್ನು ಕಲಿತರು.ಕನ್ನಡದಲ್ಲಿ ಅರವತ್ತಕ್ಕೂ ಹೆಚ್ಚಿನ ಸಂಖ್ಯೆಯ ಕೃತಿರಚನೆ ಮಾಡಿದರು.ಬಸವೇಶ್ವರ, ಶ್ರೀ ಶಿವಲಿಂಗೇಶ್ವರ, ಅಡವಿ ಸಿದ್ದೇಶ್ವರ, ಗುಡ್ಡಾಪುರದ ದಾನಮ್ಮ ಮೊದಲಾದ ಹದಿನೆಂಟು ನಾಟಕಗಳನ್ನು ರಚಿಸಿದ್ದಾರೆ. 'ಪಂಚಾಕ್ಷರಿ ವಾಣಿ' ಎಂಬ ದಾರ್ಶನಿಕ ಪತ್ರಿಕೆಗೆ ಮಾರ್ಗದರ್ಶಕರೂ ಆಗಿದ್ದರು.ಗದುಗಿನ ವೀರೇಶ್ವರ ಪುಣ್ಯಾಶ್ರಮದ ಜವಾಬ್ದಾರಿಯನ್ನು ಹೊತ್ತು ಶಿಕ್ಷಣ ಸಂಸ್ಥೆಗಳನ್ನು ವಿಸ್ತರಿಸುತ್ತಾ ಬಡಮಕ್ಕಳ ಜ್ಞಾನದಾಹವನ್ನು ಹಿಂಗಿಸಿದ್ದರು.ಈ ಎಲ್ಲಾ ಸಾಧನೆಗಳನ್ನು ನೋಡಿದರೆ ಅಂಗಹೀನತೆೆ ಸಾಧನೆಗೆ ಅಡ್ಡಿಯಾಗದು ಎಂಬುದು ಪುಟ್ಟರಾಜರ

ವಿಷಯದಲ್ಲಿ ನಿಜವಾಗಿದೆ.

ಗದ್ಯ- 4 ಪಶ್ಚಿಮ ಘಟ್ಟಗಳ ಪತನ  

1. ಪಶ್ಚಿಮ ಘಟ್ಟಗಳ ನಿಜವಾತ ಪತನ ಹೇಗಾಗುತ್ತಿದೆ?

ಪಶ್ಚಿಮ ಘಟ್ಟಗಳ ನಿಜವಾದ ಪತನವು ಪ್ರಾರಂಭವಾದದ್ದು ಸ್ವಾತಂತ್ರ್ಯ ಬಂದ ಮೇಲೆ.ಒಂದು ಕಡೆ ಏರುತ್ತಿರುವ ಜನಸಂಖ್ಯೆಯಿಂದ ಕೃಷಿಭೂಮಿಗಾಗಿ ಅರಣ್ಯನಾಶ, ಸಾಂಬಾರ ಪದಾರ್ಥಗಳಿಗಾಗಿ ಕಾಡಿನ ಉತ್ಪನ್ನಗಳಿಗಾಗಿ ಕಾಡು ದೋಚುವವರ ಸಂಖ್ಯೆ ಹೆಚ್ಚಾಗಿದೆ.ಖನಿಜ, ವಿದ್ಯುತ್ಗೆಂದು ಸರಕಾರವೇ ಪಶ್ಚಿಮ ಘಟ್ಟಗಳಿಗೆ ಲಗ್ಗೆ ಹಾಕಿದೆ.ಉದ್ದಿಮೆದಾರರು ಕೊಡಲಿಸಿಡಿಮದ್ದುಗಳಿಂದ ಸಾವಿರಾರು ಬುಲ್ಡೋಜರ್ಗಳು, ಲಕ್ಷಾಂತರ ಲಾರಿಗಳು ಲಗ್ಗೆ ಹಾಕಿದ್ದು ಪಶ್ಚಿಮ ಘಟ್ಟಗಳ ಪತನವಾಗಲಾರಂಭಿಸಿವೆ.

2. ಸಹ್ಯಾದ್ರಿ ಸಹನೆ ಕಳೆದುಕೊಳ್ಳಲು ಕಾರಣವೇನು? ಅದರ ಪರಿಣಾಮವೇನು?

ಅರಣ್ಯಗಳ ಎಡೆಬಿಡದ ಬಳಕೆಯಿಂದಾಗಿ ಭೂಮಿಯ ಮೇಲಿನ ಮಣ್ಣಿನ ಕವಚ ತೊಳೆದುಹೋಗುತ್ತಿದೆ.ನೀರಿನ ಮೂಲವಾದ ಕೆರೆ, ಸರೋವರ, ನದಿ ಒಡ್ಡುಗಳಲ್ಲಿ ಹೂಳು ತುಂಬಿ ನೀರಿನ ನಿಕ್ಷೇಪ ಖಾಲಿಯಾಗುತ್ತಿದೆ.ಕೊಡಲಿ, ಸಿಡಿಮದ್ದುಗಳಿಂದ ಪಶ್ಚಿಮ ಘಟ್ಟಗಳು ತತ್ತರಿಸುತ್ತಿವೆ.ಪ್ರವಾಹದ ಹಾವಳಿ ಹೆಚ್ಚುತ್ತಿದೆ.ಕ್ಯಾಸನೂರು ರೋಗಾಣುಗಳು, ಕಾಡುಪ್ರಾಣಿಗಳು, ಸಾಂಕ್ರಾಮಿಕ ರೋಗಗಳು ನಾಡಿಗೆ ಲಗ್ಗೆ ಹಾಕಿವೆ. ಹವಾಮಾನದ ಏರುಪೇರು, ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತಗಳಿಗೆಲ್ಲ  ಪಶ್ಚಿಮ ಘಟ್ಟಗಳ ವಿನಾಶವೇ ಕಾರಣವಾಗಿದೆ. ಅದರ ಪರಿಣಾಮವನ್ನು  ನಾವು ಅನುಭವಿಸಬೇಕಾಗಿದೆ.

ಗದ್ಯ - 5 ಎಲ್ಲಿ ಹೋಗ್ಯಾವೊ ಆ ಕಾಲ  

1. ಅಜ್ಜನು ಸಾಹೇಬರ ಮನೆಗೆ ಹೋಗಬೇಕಾಗಿ ಬಂದ ಘಟನೆಯನ್ನು ವಿವರಿಸಿ.

ಲೇಖಕರ ಅಜ್ಜನು ಸ್ವಾಭಿಮಾನಿ ಶಿಕ್ಷಕರಾಗಿ ನಿವೃತ್ತರಾದವರು.ಸಂಬಂಧಿಕರ ಪ್ರೀತಿಗೆ ಕರಗಿ, ನಿಷೇಧಿಸಲಾಗಿದ್ದರೂ ಅಕ್ಕಿಯನ್ನು ಧಾರವಾಡದಿಂದ ವಿಜಾಪುರಕ್ಕೆ ರೈಲಿನಲ್ಲಿ ಹಾಸಿಗೆಯಲ್ಲಿ ಸುತ್ತಿ ತೆಗೆದುಕೊಂಡು ಹೊರಟಿದ್ದರು.ಆಗ ಅವರನ್ನು ಒಬ್ಬ ಪೊಲೀಸ್ ಬಂದು ಸಾಹೇಬರ ಮನೆಗೆ ಬರುವಂತೆ ತಿಳಿಸಿ ಜೀಪಿನಲ್ಲಿ ಕರೆದುಕೊಂಡು ಹೋದನು.ವಿಧಿ ಇಲ್ಲದೆ ಹೆದರಿ, ನಾಚಿಕೆಯಿಂದ ಸಾಹೇಬರ ಮನೆಗೆ ಹೋಗಬೆ ಕಾಗಿ ಬಂದಿತು.ಇದರಿಂದ ಅಜ್ಜನು ಕುಸಿದು ಹೋಗಿದ್ದರು.ಆಗಿನ ಕಾಲದಲ್ಲಿ ಪೊಲೀಸ್ ಜೀಪಿನಲ್ಲಿ ಹೋಗುವಷ್ಟು ಅಪಮಾನಕರವಾದ ಸಂಗತಿ ಮತ್ತೊಂದಿರಲಿಲ್ಲ.

2. ಪ್ರಾಮಾಣಿಕ ಶಿಕ್ಷಕನಿಗೆ ದೊರೆತ ಗೌರವವು ನೊಬೆಲಿಗೆ ಸಮಾನ ಎನಿಸಿದ್ದು ಹೇಗೆ? ವಿವರಿಸಿ.

ಅಜ್ಜನು ಪೊಲೀಸ್ ಅಧಿಕಾರಿ ಮುಂದೆ ಕೈ ಮುಗಿದು ನಿಂತಿದ್ದನು.ಅದರೆ ಆ ಅಧಿಕಾರಿ ಅಜ್ಜನು ಶಿಕ್ಷಕರಾಗಿದ್ದಾಗ ಅವರಸಹಾಯದಿಂದ ಕಸಗುಡಿಸುವುದನ್ನು ಬಿಟ್ಟು, ಹಾಸ್ಟೆಲಿಗೆ ಸೇರಿ, ಓದಿ ಪೊಲೀಸ್ ಅಧಿಕಾರಿಯಾಗಿದ್ದನು.ಅವನುಕೃತಜ್ಞತೆಯಿಂದ ಕಣ್ಣಲ್ಲಿ ನೀರು ಸುರಿಸುತ್ತಾ ದೀರ್ಘದಂಡ ಪ್ರಣಾಮ ಮಾಡಿ, ಗುರುಗಳೇ ನಾನು ಮುರುಗೋಡದಭೀಮ್ಯಾ, ಮುಳವಾಡದಾಗ ನಿಮ್ಮ ಮನ್ಯಾಗಿದ್ದು ಕಲಿತ್ತಿದ್ದೆನಲ್ಲ ಎಂದನು.ಇದನ್ನು ಕೇಳಿ ಅಜ್ಜ ಸಾಹೇಬನ ಕಪಾಳಕ್ಕೆ ಹೊಡೆದು ಎಲಾ ಮಗನ ಭೀಮ್ಯಾ, ಪೊಲೀಸ್ ಆಗ್ಯೇನೋ ಎಂದರು ಆತ ಮತ್ತೊಮ್ಮೆ ಅಜ್ಜನ ಕಾಲಿಗೆ ಬಿದ್ದು, ಹೆಂಡತಿಯಿಂದ ನಮಸ್ಕಾರ ಮಾಡಿಸಿದ. ತನ್ನ ಮೈಮೇಲಿನ ಚರ್ಮ ಸುಲಿದು ಕಾಲಿಗೆ ಚಪ್ಪಲಿ ಮಾಡಿದ್ರು ಶಿಕ್ಷಕರ ಋಣ ತೀರೋದಿಲ್ಲ ಎಂದ ಪೋಲಿಸ್ ಅಧಿಕಾರಿಯ ಮಾತು. ಇಬ್ಬರೂ ಪರಸ್ಪರ ಅಳುತ್ತ ಅಪ್ಪಿಕೊಂಡ ರೀತಿ ಇದು ಪ್ರಾಮಾಣಿಕ ಶಿಕ್ಷಕನಿಗೆ ದೊರೆತ ನೊಬೆಲ್ ಪ್ರಶಸ್ತಿಗೆ ಸಮಾನ ಎನಿಸಿತು.

ಗದ್ಯ- 6 ಶಿಷ್ಯವತ್ಸಲ ರಾಮನ್  

1. ರಾಮನ್ ಶಿಷ್ಯವತ್ಸಲರೆನಿಸಿದುದು ಹೇಗೆ?

ರಾಮನ್ರು ಶಿಷ್ಯರನ್ನು ಅಂಕಗಳನ್ನು ಪರಿಗಣಿಸಿ ಅಯ್ಕೆ ಮಾಡುತ್ತಿರಲಿಲ್ಲ ಅವರ ಜ್ಞಾನ, ದೃಢ-ನಿಶ್ಚಯ ಎಲ್ಲವನ್ನು ಪರೀಕ್ಷಿಸಿ  ಯೋಗ್ಯರನ್ನು  ಯಾವುದೇ  ಸ್ವಾರ್ಥವಿಲ್ಲದೆ  ಆಯ್ಕೆ  ಮಾಡಿಕೊಳ್ಳುತ್ತಿದ್ದರು.ಯಾರೊಬ್ಬರ  ಶಿಫಾರಸ್ಸನ್ನು ಪರಿಗಣಿಸುತ್ತಿರಲಿಲ್ಲ ಶಿಷ್ಯರು ನಡೆಸುವ ಸಂಶೋಧನೆ ಅತ್ಯುತ್ತಮ ವರ್ಗದ್ದಾಗಿರಬೇಕು.ಅವರ ಪ್ರಗತಿ ವಿಚಾರಿಸಿಕೊಂಡು ಅವರನ್ನುನೇಮಕ ಮಾಡಿಕೊಳ್ಳುವ ಅಧಿಕಾರಿಗಳಿಗೆ ಪತ್ರ ಬರೆದು ತಕ್ಕಸ್ಥಾನವು ಸಿಗುವಂತೆ ವ ಾಡು ತ್ತಿದ್ದರು.ಉತ್ತವು ವಾದ ಪ್ರತಿಭೆಯನ್ನು ಗುರುತಿಸಿ ಬೆನ್ನುತಟ್ಟಿ ಪ್ರೋತ್ಸಾಹ ಕೊಡುತ್ತಿದ್ದರು.

2. ಶಿಷ್ಯರ ಸರ್ವತೋಮುಖ ಬೆಳವಣಿಗೆಗಾಗಿ ರಾಮನ್ರು ಮಾಡುತ್ತಿದ್ದು ಏನು?

ಶಿಷ್ಯರನ್ನು ಆರಿಸಿಕೊಂಡ ಮೇಲೆ ಅವನಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೊಡುತ್ತಿದ್ದರು. ಮಗನಿಗಿಂತ ಹೆಚ್ಚಾಗಿ ಎಚ್ಚರಿಕೆಯಿಂದ ಅವರಲ್ಲಿ ಮೇಲುಕೀಳು ಭಾವನೆ  ಬರದಂತೆ ನೋಡಿಕೊಳ್ಳತ್ತಿದ್ದರು.  ಶಿಷ್ಯರನ್ನು ಪುನಃಪುನಃ ಪ್ರಶ್ನಿಸಿ ಅವರಲ್ಲಿ ಹುದುಗಿದ್ದ ಶಕ್ತಿ ಹೊರಬರುವಂತೆ ನಿರ್ವಂಚನೆಯಿಂದ ದುಡಿವ ಗುರುಗಳಾಗಿದ್ದರು.ಶಿಷ್ಯರ ಉತ್ತಮ ಪ್ರಬಂಧವನ್ನುಐದಾರು ಸಲ ತಿದ್ದಿ ಪ್ರಕಟಣೆಗೆ ಯೋಗ್ಯವೆಂದು ಒಪ್ಪಿ ಅವನ ಹೆಸರಿನಲ್ಲಿ ಪ್ರಕಟಣೆಗೆ ಕಳುಹಿಸುತ್ತಿದ್ದರು. ಶಿಷ್ಯರಸೆಮಿನಾರ್ಗಳಿಗೆ ತಪ್ಪದೇ ಹೋಗಿ ಎಲ್ಲವನ್ನೂ ಗ್ರಹಿಸಿ ಸಲಹೆ ಕೊಡುತ್ತಿದ್ದರು.ಮೈಯೆಲ್ಲ ಕಿವಿಯಾಗಿ ಶಿಷ್ಯರು ಕೊಟ್ಟ ಪ್ರತಿ ವಿವರವನ್ನು ಗ್ರಹಿಸುತ್ತಿದ್ದರು.ಸಂದೇಹ ಪರಿಹಾರ ಮಾಡಲು ತಮ್ಮದೇ ಸಲಹೆಗಳನ್ನು ಕೊಡುತ್ತಿದ್ದರು.

3. 'ರಾಮನ್ - ನಾಥ್' ಸಿದ್ದಾಂತ ಪ್ರಸಿದ್ಧಿಗೊಳ್ಳಲು ಮುಖ್ಯ ಕಾರಣ ಏನು?

ರಾಮನ್ - ನಾಥ್ ಸಿದ್ಧಾಂತ ಪ್ರಸಿದ್ಧಿಗೊಳ್ಳಲು ಮುಖ್ಯ ಕಾರಣ ಏನೆಂದರೆ ರಾಮನ್ರು ಸೆಮಿನಾರುಗಳಲ್ಲಿ ಗುರುಶಿಷ್ಯರ ನಡುವೆ ನಡೆದ ವಾದ ವಿವಾದಗಳು ಹೊಸ ತತ್ತ್ವವೊಂದನ್ನು ಹೊರಗೆಡಹುವಲ್ಲಿ ಯಶಸ್ವಿಯಾಗುತ್ತಿದ್ದವು.ಗಣಿತದಲ್ಲಿ ಗಣ್ಯರಾದ ನರೇಂದ್ರನಾಥರಿಗೆ ನನ್ನ ಮನಸ್ಸಿಗೆ ಹಾಗೆ ತೋರುತ್ತದೆ ಗುಣಿಸಿನೋಡು ಎಂದರು.ಮಾರನೇ ದಿನ ಅದೇ ರೀತಿ ಆತ ಗುಣಾಕಾರ ಮಾಡಿ ಗಣಿತದ ಸಾಕ್ಷ್ಯವನ್ನು ಒದಗಿಸಿದಾಗ ಅವರ ಆನಂದಕ್ಕೆ ಪಾರವೇ ಇರಲಿಲ್ಲವಂತೆ.ನರೇಂದ್ರನಾಥರೊಡನೆ ಅಂದು ನಡೆಸಿದ ಚಚರ್ೆ ಮುಂದೆ 'ರಾಮನ್ - ನಾಥ್' ಸಿದ್ಧಾಂತವೆಂದು ಪ್ರಸಿದ್ಧಿಗಳಿಸಿತು ಎನ್ನುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

4. ರಾಮನ್ರನ್ನು ಮ್ಯಾಕ್ಸ್ ಬಾನರ್ ರವರು ಏಕೆ ಮೆಚ್ಚಿಕೊಂಡಿದ್ದರು?

ಶಿಷ್ಯರಾದವರು, ತಾವು ಮಾಡುತ್ತಿರುವ ಸಂಶೋಧನೆಗಳ ವಿವರಗಳನ್ನು ಸೆಮಿನಾರ್ಗಳಲ್ಲಿ ಪ್ರಸ್ತಾಪಿಸಬೇಕಾಗಿತ್ತು.ರಾಮನ್ರು ತಪ್ಪದೇ ಆ ಸೆಮಿನಾರ್ಗಳಲ್ಲಿ ಮೈಯೆಲ್ಲ ಕಿವಿಯಾಗಿ ಶಿಷ್ಯರು ಕೊಟ್ಟ ಪ್ರತಿ ವಿವರವನ್ನು ಗ್ರಹಿಸುತ್ತಿದ್ದರು.ಸಂದೇಹ ಪರಿಹಾರ ಮಾಡಲು ತಮ್ಮದೇ ಸಲಹೆಗಳನ್ನು ಕೊಡುತ್ತಿದ್ದರು.ಅವರ ಪ್ರಖರವಾದ ಬುದ್ಧಿ ಅನೇಕ ಹಂತಗಳನ್ನು ದಾಟಿ ಒಂದು ಬಗೆಯ ಒಳ ಅರಿವಿನ ಬಲದಿಂದ ಹೊಸ ಗುರಿಯೊಂದರತ್ತ ಹಾರುತ್ತಿತ್ತು.ಆ ಅದ್ಭುತ ಶಕ್ತಿಯನ್ನು ಕಂಡು ಮ್ಯಾಕ್ಷ್ ಬಾನರ್ ರವರು ಮೆಚ್ಚಿಕೊಂಡಿದ್ದರು.

ಗದ್ಯ- 7 ನನ್ನ ಗೋಪಾಲ  

1. ಗೋಪಾಲನಲ್ಲಿ ತಾಯಿಗಿರುವ ಪ್ರೀತಿಯನ್ನು ಕುರಿತು ಬರೆಯಿರಿ.

ಗೋಪಾಲನನ್ನು ಹೆತ್ತ ತಾಯಿಯು ಕಡುಬಡವಳಾಗಿದ್ದರೂ ಜೀವನ ನಿರ್ವಹಣೆ ಭಾರವನ್ನು ಅವಳು ಹೊತ್ತುಕೊಂಡು ಒಂದು ಸಣ್ಣ ಗುಡಿಸಲಲ್ಲಿ ವಾಸವಾಗಿದ್ದಳು.ಮಗನನ್ನು ಬಹಳವಾಗಿ ಪ್ರೀತಿಸುತ್ತಿದ್ದ ಅವಳು ಚರಕದಿಂದ ನೂಲು ತೆಗೆದು ಮಗನ ಓದಿಗೆ ಸಂಸಾರದ ಖರ್ಚನ್ನು ಬಹಳ ಕಷ್ಟದಿಂದಲೇ ನಿಭಾಯಿಸುತ್ತಿದ್ದಳು.ಮಗನು ಹೊಸಪಂಚೆ ಕೇಳಿದಾಗ ಹಗಲಿರುಳೂ ನೂತು ಸಂಪಾದಿಸಿ ಅದನ್ನು ಕೊಡಿಸಿದಳು.ಸಂಜೆಯ ವೇಳೆ ಶಾಲೆಯಿಂದ ಬರುವಾಗ ಕಾಡು ದಾಟುವ ಸಮಯ ಭಯವೆಂದಾಗ ಶ್ರೀಕೃಷ್ಣನನ್ನು ಪ್ರಾರ್ಥಿಸಿದಳು.ದೇವರು (ಗೋಪಾಲ) ನಿನ್ನ ರಕ್ಷಣೆಯನ್ನು ಮಾಡುವನೆಂದು ಹೇಳಿ ಅವನ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ ಕಳುಹಿಸಿದಳು.ನಿನ್ನ ಅಣ್ಣ ಗೋಪಾಲನು ನಿನ್ನನ್ನು ಕಾಡು ದಾಟಿಸುವನು ಎಂದು ಹೇಳಿ ಶಾಲೆಗೆ ಕಳುಹಿಸಿ, ಅವನಲ್ಲಿ ಧೈರ್ಯ ತುಂಬುತ್ತಿದ್ದಳು.

2. ಈ ಪಾಠದಲ್ಲಿ ಬಂದ ಪ್ರಕೃತಿಯ ವರ್ಣನೆಯ ಕುರಿತು ಬರೆಯಿರಿ.

ಬೆಳಗಿನಲ್ಲಿ ಸೂರ್ಯನು ಚಿನ್ನದ ಕಿರಣಗಳಿಂದ ಬಾವಿಯ ಬಳಿಯ ತೆಂಗಿನ ಮರದಲ್ಲಿ ಮಿರುಗುತ್ತಿದ್ದಾನೆ.ಕಾಡಿನಲ್ಲಿ ಮಲ್ಲಿಗೆಯ ಹೂವು, ಕೇದಗೆಯ ಹೂವು, ಸಂಪಿಗೆಯ ಹೂವು, ಪರ್ವತಬಾಳೆಯ ಹೂವು, ಗೋರಂಟಿಯ ಹೂವುಗಳು ಅರಳಿ ಸಾವಿರಾರು ಮಳೆಬಿಲ್ಲುಗಳು ಸೇರಿ ಕುಣಿದಂತೆ ಕಾಣುತ್ತಿದ್ದವು.ಅದರ ಸುಗಂಧವೂ ಸುತ್ತಲೂ ಹರಡಿ ಹೊಸ ಸಂತೋಷವನ್ನು ಕೊಡುತ್ತಿತ್ತು.ಹಕ್ಕಿಗಳ ಇಂಪಾದ ಗಾನ, ತಂಗಾಳಿ, ಸೂರ್ಯ ದೇವನ ಹೊಂಬೆಳಕು ಹಸುರಾದ ಚಿಗುರು ಹುಲ್ಲಿನ ಮೇಲೆ ಕೋಟ್ಯಂತರ ಹಿಮಮಣಿಗಳು ಮಿರುಗುವ ಲೀಲೆ ಬಹಳ ಸೊಗಸಾಗಿತ್ತು.ಹೀಗೆ ಪ್ರಕೃತಿಯು ನಯನ ಮನೋಹರವಾಗಿ ಕಾಣುತ್ತಿತ್ತು.

3. ಬನದ ಗೋಪಾಲನ ಹಾಡಿನ ಸಾರವನ್ನು ಬರೆಯಿರಿ.

ಗೋಪಾಲನು ತಪಸ್ಸನ್ನು ಮಾಡಿದ ಮನುಷ್ಯರ ಒಲುಮೆಗೆ ಸೆರೆಯಾಗುವನು.ತಪಸ್ವಿಗಳು ಯುಗಯುಗಗಳು ತಪಸ್ಸನ್ನು ಮಾಡಿ ಯೋಗಿಗಳಾಗಲು ಸಾಧನೆಯನ್ನು ಮಾಡುವರು. ವಿಶಾಲವಾದ ಕಡಲಿಗಿಂತ ಭಕ್ತರ ಕಣ್ಣೀರು ಅವನ ಇರುವಿಕೆಯ ಸ್ಥಾನವಾಗಿದೆ.ಪರ್ವತದ ಎತ್ತರಕ್ಕಿಂತ ಭಕ್ತರ ಹೃದಯಮಂದಿರವನ್ನು ಆತನು ಬಯಸುತ್ತಾನೆ.  ಬೃಂದಾವನದಲ್ಲಿ ಗೋಪಿಕೆಯರು ಆಡುವ ಮಾತಿನಲ್ಲಿ ವೇದಗಳಲ್ಲಿ ಇರುವ ಸಾರವು ಸತ್ಯವು ಅಡಗಿದೆ. ಹಾಲನು ಮಾರುವ ಹೆಣ್ಣುಗಳ ಪ್ರೀತಿಯು ಯೋಗಿಯ ಸಾಧನೆಯನ್ನು ಕೂಡಾ ಮೀರಿದ್ದು ಎಂದು ಗೋಪಾಲನು ಕೊಳಲನ್ನೂದುತ್ತಾ ಹಾಡುತ್ತಾನೆ.

Previous
Next Post »

No comments:

Post a Comment

Copyright © TefZa. All rights reserved.