ಪದ್ಯಪಾಠ - 5.
ಸಂಕಲ್ಪ ಗೀತೆ - ಜಿ. ಎಸ್. ಶಿವರುದ್ರಪ್ಪ
1. ಪ್ರೀತಿಯ ಹಣತೆಯ ಹಚ್ಚೋಣ
ಆಯ್ಕೆ :- ಈ ವಾಕ್ಯವನ್ನು ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ರಚಿಸಿರುವ 'ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ :- ಕವಿಗಳು ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ನಾವು ಜೀವನದಲ್ಲಿ ಪ್ರೀತಿಯ ದೀಪವನ್ನು ಹಚ್ಚುವ ಸಂಕಲ್ಪ ಕೈಗೊಳ್ಳುವುದರಿಂದ ದ್ವೇಷರಹಿತ ಸಮಾಜ ನಿಮರ್ಾಣ ಮಾಡಬಹುದು ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ.
2. ಮುಂಗಾರಿನ ಮಳೆಯಾಗೋಣ
ಆಯ್ಕೆ :- ಈ ವಾಕ್ಯವನ್ನು ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ರಚಿಸಿರುವ 'ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ :- ಕವಿಗಳು ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ನಾವು ಮುಂಗಾರಿನ ಮಳೆಯಂತೆ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳುವುದರಿಂದ ನದೀಜಲಗಳನ್ನು ಶುದ್ಧವಾಗಿ ಇಟ್ಟುಕೊಳ್ಳಬಹುದು ಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ.
3. ಹೊಸ ಭರವಸೆಗಳ ಕಟ್ಟೋಣ
ಆಯ್ಕೆ :- ಈ ವಾಕ್ಯವನ್ನು ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ರಚಿಸಿರುವ 'ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ :- ಕವಿಗಳು ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ನಾವು ಹೊಸ ಭರವಸೆಯನ್ನು ಮೂಡಿಸುವ ಸಂಕಲ್ಪ ಕೈಗೊಳ್ಳುವುದರಿಂದ ಸಮಾಜದ ನೈತಿಕ ಅಧಃಪತನವನ್ನು ತಡೆಯಬಹುದುಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ.
4. ಹೊಸ ಎಚ್ಚರದೊಳು ಬದುಕೋಣ
ಆಯ್ಕೆ :- ಈ ವಾಕ್ಯವನ್ನು ಕವಿ ಶ್ರೀ ಜಿ. ಎಸ್. ಶಿವರುದ್ರಪ್ಪ ಅವರು ರಚಿಸಿರುವ 'ಎದೆತುಂಬಿ ಹಾಡಿದೆನು' ಕವನ ಸಂಕಲನದಿಂದ ಆಯ್ದ 'ಸಂಕಲ್ಪಗೀತೆ' ಎಂಬ ಕವಿತೆಯಿಂದ ಆರಿಸಲಾಗಿದೆ.
ಸಂದರ್ಭ :- ಕವಿಗಳು ಜೀವನದಲ್ಲಿ ಧನಾತ್ಮಕ ಮನೋಭಾವನೆಯ ಧೃಡಸಂಕಲ್ಪವನ್ನು ಹೊಂದಿರಬೇಕು ಎಂದು ಹೇಳುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ವಾರಸ್ಯ :- ಎಲ್ಲ ಮತಗಳು ಸಾಧನೆಯ ದಾರಿಗಳು ಎಂಬ ಎಚ್ಚರದಲ್ಲಿ ಬದುಕುವ ಸಂಕಲ್ಪ ಕೈಗೊಳ್ಳುವುದರಿಂದ ದೇಶದಲ್ಲಿ ಶಾಂತಿಯು ನೆಲೆಸುವಂತೆ ಮಾಡಬಹುದುಎಂದು ಕವಿಗಳು ಸ್ವಾರಸ್ಯಪೂರ್ಣವಾಗಿ ತಮ್ಮ ಭಾವನೆಯನ್ನು ಅಭಿವ್ಯಕ್ತಪಡಿಸುತ್ತಾರೆ
No comments:
Post a Comment